There are no items in your cart
Add More
Add More
Item Details | Price |
---|
ಈ ಯೋಜನೆ ಏಕೆ?
ನಾವು ತುಂಬಾ ಶ್ರದ್ಧೆಯಿಂದ, ಆದರೆ ಪರೀಕ್ಷೆಯನ್ನು ಭೇದಿಸಲು ಸಾಧ್ಯವಾಗದ ಅನೇಕ ಪ್ರತಿಭೆಗಳನ್ನು ಕಂಡಿದ್ದೇವೆ. ಇದರ ಕಾರಣ ಸರಿಯಾದ ಮಾರ್ಗದರ್ಶನದ ಕೊರತೆ. ಸ್ವಯಂ ಅಧ್ಯಯನದ ತೊಂದರೆಗಳು, ಹೋರಾಟ, ಕಾಠಿಣ್ಯ ಮತ್ತು ಸ್ವಯಂ-ಪ್ರೇರಿತರಾಗಿ ಮುಂದುವರಿಯಲು ಅಗತ್ಯವಾದ ಮನಸ್ಥೈರ್ಯದ ಬಗೆಗೆ ನಮಗೆ ಅರಿವು ಮತ್ತು ಕಾಳಜಿ ಇದೆ. ಅನುಪಸ್ಥಿತಿಯಲ್ಲಿಯೂ ಸಹ ನಿಮಗೆ ಮಾರ್ಗದರ್ಶನ ನೀಡುವುದು ಈ ಯೋಜನೆಯ ಉದ್ದೇಶ. ಅನೇಕರು ಹಣದ ಸಮಸ್ಯೆ ಎದುರಿಸುತ್ತಿದ್ದರೆ, ಇನ್ನೂ ಕೆಲವರು ನಮ್ಮನ್ನು ಭೌತಿಕವಾಗಿ ತಲುಪಲು ದೂರದ ಸ್ಥಳಗಳಲ್ಲಿರುತ್ತಾರೆ –ಆದ್ದರಿಂದ ನಾವು ಆನ್‍ಲೈನ್‍ನಲ್ಲಿಯೂ ಸಹ ಸಾಕಷ್ಟು ಪರಿಣಾಮಕಾರಿಯಾಗಿ ಹಾಜರಿದ್ದೇವೆ.
ನಾನು ಹೇಗೆ ಪ್ರಾರಂಭಿಸುವುದು?
ಜ್ಞಾನಗಂಗೋತ್ರಿ ತಂಡದವರಾದ ನಾವು ನಿಮ್ಮ ತಯಾರಿಯನ್ನು ಪ್ರಾರಂಭಿಸಲು ನಿಮಗೆ ಮಾರ್ಗದರ್ಶನ ನೀಡುತ್ತೇವೆ ಮತ್ತು ಯಶಸ್ಸಿನವರೆಗೂ ನಿಮ್ಮೊಂದಿಗೆ ಇರುತ್ತೇವೆ! ನಮ್ಮ ಯೋಜನಾ-ವೇಳಾಪಟ್ಟಿಯನ್ನು ಅನುಸರಿಸಿ ಪ್ರಾರಂಭಿಸಿ.
ಈ ಯೋಜನೆ ಏನು?
ಜ್ಞಾನಗಂಗೋತ್ರಿ ತಂಡ ರೂಪಿಸಿರುವ ಯೋಜನೆ 17 ವಾರಗಳದ್ದಾಗಿದ್ದು (ಹಂತ I ಮತ್ತು ಹಂತ - II ಸೇರಿದಂತೆ) ಕೆಳಗೆ ವಿವರಿಸಲಾಗಿದೆ. ಕಾರ್ಯಕ್ರಮದ ಮುಖ್ಯಾಂಶಗಳು ಹೀಗಿವೆ:
• ಅನುಕೂಲಕರ, ಸುಲಭ ಮತ್ತು ಸಂಪೂರ್ಣ ಅಧ್ಯಯನಕ್ಕಾಗಿ ವಿಷಯಗಳನ್ನು ದೈನಂದಿನ ಮತ್ತು ಸಾಪ್ತಾಹಿಕ ಗುರಿಗಳಾಗಿ ವಿಂಗಡಿಸಲಾಗಿದೆ;
• ನಿಮ್ಮ ಸಿದ್ಧತೆಯನ್ನು ಪರಿಷ್ಕರಿಸಲು ಮತ್ತು ತಯಾರಿಯ ಮಟ್ಟ ತಿಳಿಯಲು, ನಿಮಗೆ ಸಹಾಯ ಮಾಡುವ ಸಲುವಾದ ದಿನದ ಪಠ್ಯವನ್ನು ಆಧರಿಸಿದ, ದೈನಂದಿನ ಉಚಿತ ವಿಷಯವಾರು ರಸಪ್ರಶ್ನೆ ಒಂದು ಹೆಚ್ಚುವರಿ ವೈಶಿಷ್ಟ್ಯವಾಗಿದೆ.
JG’s ONLINE CLASSES- Click to Download
To subscribe to Test Series- Click
• ಈ ಯೋಜನೆ ನಿಮ್ಮನ್ನು ಹೆಚ್ಚು ಸಮರ್ಥರಾಗಿಸಲು, ನಿಮ್ಮ ಆಳ ಆಧ್ಯನದ ವಿಷಯಗಳನ್ನು ಇನ್ನಷ್ಟು ಬಲಪಡಿಸಲು ಮತ್ತು ನಿಮ್ಮ ದುರ್ಬಲ ವಿಷಯಗಳ ಮೇಲೆ ಹಿಡಿತ ಸಾಧಿಸುವತ್ತ ನಿಮ್ಮನ್ನು ಕರೆದೊಯ್ಯುತ್ತದೆ, ಹೀಗಾಗಿ ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ;
• ಪ್ರತಿ ವಿಷಯ ಅಧ್ಯಯನದ ನಂತರ ಪುನರಾವರ್ತನೆ-ಪರೀಕ್ಷೆಯನ್ನು ನೀಡಲಾಗುತ್ತದೆ:
• ಸಂಭವನೀಯ ಪ್ರಬಂಧ ವಿಷಯಗಳ ಕುರಿತು, ಸಾರಾಂಶದೊಂದಿಗೆ ಪತ್ರಿಕೆ 1ಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗುವುದು;
ನಿಮ್ಮ ಎಲ್ಲಾ ಸಿದ್ಧತೆಯ ಪ್ರತಿಬಿಂಬವೇ “ಪರೀಕ್ಷಾ ಸರಣಿಗಳು” !!!
ಹಲವು ಅಭ್ಯರ್ಥಿ ಮಿತ್ರರ ಅಳಲೇನೆಂದರೆ, ಅವರು ಅತ್ಯಂತ ಪರಿಶ್ರಮ ವಹಿಸಿ ತಯಾರಿ ನಡೆಸಿದ್ದರೂ ಸಹ ಸರಿಯಾದ ಮಾರ್ಗದರ್ಶಿಯ ನೆರವಿನ ಕೊರತೆಯಿಂದಾಗಿ ಅವರ ಕಾರ್ಯಕ್ಷಮತೆಯನ್ನು ಪರೀಕ್ಷೆಗೆ ಮೊದಲೇ ತಿಳಿಯಲು ಸಾಧ್ಯವಾಗದಿದ್ದುದು. ಇಲ್ಲಿ ನಾವು ನಮ್ಮ ದೈನಂದಿನ ಅಧ್ಯಯನ-ಯೋಜನೆಯೊಂದಿಗೆ ಪರೀಕ್ಷಾ-ಸರಣಿಯನ್ನೂ ನೀಡುತ್ತಿದ್ದೇವೆ!
ಜ್ಞಾನಗಂಗೋತ್ರಿ ‘ನಿಮ್ಮನ್ನು ಸೇವೆ ಮಾಡಲು ಪ್ರೇರೇಪಿಸುತ್ತಿದೆ’, ಸುರಕ್ಷಿತ ಭವಿಷ್ಯಕ್ಕಾಗಿ ನೀವು ನಮ್ಮೊಂದಿಗೆ ‘ಯಶಸ್ಸಿನ್ನತ್ತ ಹೆಜ್ಜೆ ಇಡಲು ಪ್ರಾರಂಭಿಸಿ’!
JG’s ONLINE CLASSES- Click to Download
To subscribe to Test Series- Click